ಸ್ವಚ್ಛ ಪರಿಸರ ಹೊಂದಿದ್ದರೆ ಮಾತ್ರ,, ಸ್ವಚ್ಛತಾ ಕಾರ್ಯಕ್ರಮದ ಮೂಲಕ ಉತ್ತಮ ಆರೋಗ್ಯವನ್ನು ಹೊಂದಲು ಸಾಧ್ಯ ಎಂದು ಆರೋಗ್ಯ ನಿರೀಕ್ಷಕರಾದ ಶಿವಪ್ರಕಾಶ್ ರವರು ತಿಳಿಸಿದರು..
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಗಾಳಿಗುಡ್ಡದ ವಿವಿಧ ಶ್ರೀ ಶಕ್ತಿ ಸಂಘಗಳ ಆಶ್ರಯದಲ್ಲಿ, ಗಾಳಿಗುಡ್ಡ ಶಾಲಾ ಆವರಣದ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಗ್ರಾಮದ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಭಾಗವಹಿಸಿದ್ದರು.. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿಯ ಸೇವಾ ಪ್ರತಿನಿಧಿಗಳಾದ ನಳಿನಾಕ್ಷಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಮಹೇಶ್.ಹರೀಶ್. ಅಂಗನವಾಡಿ ಶಿಕ್ಷಕಿ ಸವಿತ ಹಾಗೂ ಬಾಳುಪೇಟೆಯ ಆರೋಗ್ಯ ನಿರೀಕ್ಷಕರಾದ ಶಿವಪ್ರಕಾಶ್ ರವರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು
