ಹಂಜಳಿಗೆ ಕಾಳಿಂಗಪ್ಪ ವೆಲ್ ಪೇರ್ ಅಸೋಸಿಯೇಷನ್ ಇವರ ವತಿಯಿಂದ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಹಾಗೂ ಶಾಲಾ ಬ್ಯಾಗ್ ವಿತರಣಾ ಸಮಾರಂಭ ಕಾರ್ಯಕ್ರಮವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈರಾಪುರದಲ್ಲಿ ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮವನ್ನು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೆಗೌಡ ಹಾಗೂ ಹಂಜಳಿಗೆ ಮಂಜುನಾಥ್ ಮತ್ತು ಶಾಲೆ ಶಿಕ್ಷಕರು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿದರು..
ಹಂಜಳಿಗೆ ಕಾಳಿಂಗಪ್ಪ ವೆಲ್ಫೇರ್ ಅಸೋಸಿಯೇಷನ್ (HKWA) ಸಂಸ್ಥಾಪಕ ಮಂಜುನಾಥ್ ಕಾಳಿಂಗಪ್ಪ ಮಾತನಾಡಿ, “ನಾನು ಮಾಡುತ್ತಿರುವುದು ದಾನವಲ್ಲ. ಈ ದೇಶದ ನಾಗರಿಕನಾಗಿ ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನಗೆ ಅನೇಕ ಸ್ನೇಹಿತರು ಸಹಕಾರ ನೀಡುತ್ತಿದ್ದಾರೆ. ಕಳೆದ 13 ವರ್ಷಗಳಿಂದ ಈ ಕಾರ್ಯ ಮಾಡುತ್ತಾ ಬಂದಿದ್ದು, ‘ನಮ್ಮ ನಡಿಗೆ ಸರ್ಕಾರಿ ಶಾಲೆಗಳ ಕಡೆಗೆ’ ಎಂಬ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ” ಎಂದರು. ಒಂದನೇ ತರಗತಿ ವಿದ್ಯಾರ್ಥಿಯೂ ಕಂಪ್ಯೂಟರ್ ಬಳಸಬೇಕು ಎಂಬ ಉದ್ದೇಶದಿಂದ ಸ್ಮಾರ್ಟ್ ಕ್ಲಾಸ್ ಆರಂಭಿಸಿರುವುದಾಗಿ ಸಂತಸ ಹಂಚಿಕೊಂಡರು ಸರ್ಕಾರಿ ಶಾಲೆಯ ಮಕ್ಕಳು ಕೀಳರಿಮೆ ಪಡದೆ, ಇಲ್ಲಿನ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಪ್ರಜೆಗಳಾಗುವಂತೆ ಕರೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ ಅವರು ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಸರ್ಕಾರ ನೀಡುವ ಸವಲತ್ತುಗಳ ಜೊತೆಗೆ ಮಂಜುನಾಥ್ ಅವರ ಟ್ರಸ್ಟ್ ಮೂಲಕ ಪುಸ್ತಕಗಳನ್ನು ನೀಡಿ ವ್ಯವಸ್ಥೆ ಮಾಡಿದ್ದಾರೆ. ಈಗಾಗಲೇ ಆಲೂರು ತಾಲೂಕಿನ ಎಲ್ಲ ಶಾಲೆಗಳಿಗೂ ಪುಸ್ತಕಗಳನ್ನು ಹಂಚಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮ ಶಿಕ್ಷಕರು ಮತ್ತು ಮಕ್ಕಳು ಇದ್ದಾರೆ, ಇದಕ್ಕೆ ಪೋಷಕರ ಪಾತ್ರವೂ ಮುಖ್ಯ ಎಂದರು.
ಮಕ್ಕಳಲ್ಲಿ ನೀವು ಸಹ ಮಂಜುನಾಥ್ ಅವರಂತೆ ಆಗಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಮಂಜುನಾಥ್ ಮತ್ತು ಅವರ ತಂಡದ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಅದಲ್ಲದೆ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಾಗೂ ಕನ್ನಡ ನಾಡು ನುಡಿ ಭಾಷೆಯ ದೃಷ್ಟಿಯಿಂದ ಕರವೇ ಉಪಾಧ್ಯಕ್ಷ ನವೀನ್ ಬೈರಾಪುರ ಇವರ ನೇತೃತ್ವದಲ್ಲಿ ಉದಯವಾಣಿ ಪತ್ರಿಕೆಯನ್ನು ಉಚಿತವಾಗಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೆಗೌಡ ಎಸ್ ಡಿ ಎಂ ಸಿ ಅಧ್ಯಕ್ಷ ಚಂದ್ರೆಗೌಡ, ಅಕ್ಷರ ದಾಸೋಹ ನಿರ್ದೇಶಕ ಸಿದ್ದೇಶ್, ಮುಖ್ಯೋಪಾಧ್ಯಾಯಿನಿ ಎಲಿಜಬೆತ್, ಬಿ. ಆರ್. ಸಿ ಸುನೀತಾ, ಆಲೂರು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಾಗೂ ಕರವೇ ಉಪಾಧ್ಯಕ್ಷ ನವೀನ್ ಬೈರಾಪುರ. ಸೇರಿದಂತೆ ಇತರರು ಉಪಸ್ಥಿತರಿದ್ದರು…


