ಸಕಲೇಶಪುರ ಬಿಎಂ ರಸ್ತೆಯಲ್ಲಿರುವ ಬಾಲಾಜಿ ಟ್ರೇಡರ್ಸ್ ಅಂಗಡಿಯಲ್ಲಿ ಕಳ್ಳತನ ಮಾಡಲು ಪ್ರಯತ್ನ ನಿನ್ನೆ ರಾತ್ರಿ ನಡೆದಿರುವುದಾಗಿ ವರದಿ ಆಗಿದೆ.
ಮಾತೃಶ್ರೀ ದಿನಸಿ ಅಂಗಡಿ ಬೀಗ ಒಡೆದು ಸಣ್ಣ ಪುಟ್ಟ ವಸ್ತುಗಳನ್ನು ಹಾಗೂ 10,000 ಹಣವನ್ನು ಕಳ್ಳತನ ಮಾಡಿರೋದು ಕೂಡ ತಿಳಿದು ಬಂದಿರುತ್ತದೆ.
ಕಳೆದ ಮೂರು ನಾಲ್ಕು ವರ್ಷಗಳಿಂದ ಸತತವಾಗಿ ನಗರದಲ್ಲಿ ಕಳ್ಳತನ ನಡೆಯುತಿದ್ದು ಇದನ್ನು ತಾಲೂಕು ವರ್ತಕರ ಸಂಘ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಹಾಗೂ ಡಿ ವೈ ಎಸ್ ಪಿ ಅವರ ಬಳಿ ಹಾಗೂ ಶಾಸಕರ ಬಳಿ ಹಲವಾರು ಬಾರಿ ಕಳ್ಳತನ ಪ್ರಕರಣಗಳನ್ನು ಭೇದಿಸುವಂತೆ ಒತ್ತಡ ತಂದಿದ್ದರು. ಆದರೆ ಇದುವರೆಗೆ ಪ್ರಕರಣಗಳು ಯಾವುದು ಕೂಡ ಪತ್ತೆ ಆಗಿಲ್ಲ.
ಪ್ರತಿಸಾರಿಯು ಮನವಿಯನ್ನು ನೀಡಿದಾಗ ನಮ್ಮಲ್ಲಿ ಸಿಬ್ಬಂದಿ ಕೊರತೆಯ ಕಾರಣಗಳನ್ನು ನೀಡುತ್ತಾ ದಿನ ತಳ್ಳುತ್ತಿರುವ ಪೊಲೀಸ್ ಇಲಾಖೆಯ ಕ್ರಮವನ್ನು ಖಂಡಿಸುತ್ತಾ ಮುಂದಿನ ದಿನಗಳಲ್ಲಿ ಹಾಸನ ಎಸ್ ಪಿ ಅವರ ಬಳಿ ಹಾಗೂ ಉಸ್ತುವಾರಿ ಸಚಿವರ ಗಮನಕ್ಕೆ ತರಲು ಸಂಘವು
ನಿರ್ಧರಿಸಿರುತ್ತದೆ ಎಂದು ತಿಳಿಸಿದ್ದಾರೆ
