🌹ಕುನಿಗನಹಳ್ಳಿ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಎಲ್ಲಾ ಮಕ್ಕಳಿಗೂ ದಾನಿಗಳಿಂದ ಉಚಿತ ಸಮವಸ್ತ್ರ ವಿತರಣೆ
ಸರ್ಕಾರಿ ಶಾಲೆಗಳ ಉಳಿವಿಗೆ ಸರ್ವರ ಪ್ರಯತ್ನ ಅಮೂಲ್ಯವಾದದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಕಾಶ್ ರವರು ತಿಳಿಸಿದ್ದಾರೆ.
ಅವರು ಕುನಿಗನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಸರ್ಕಾರಿ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳ ಮಕ್ಕಳಿಗೆ ಉಚಿತ ಸಮವಸ್ತ್ರವನ್ನು ದಾನಿಗಳಾದ ಗೋಲ್ಡ್ ರಮೇಶ್ ರವರಿಂದ ಪಡೆದು ವಿತರಿಸುವ ಸಂದರ್ಭದಲ್ಲಿ ಮಾತನಾಡುತ್ತಾ, ಪಂಚಾಯತಿ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೂ ಎಲ್ಲಾ ಸೌಲಭ್ಯವನ್ನು ದಾನಿಗಳ ನೆರವಿನಿಂದ ಪಡೆದು ಸೌಲಭ್ಯ ಒದಗಿಸುವಲ್ಲಿ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ರೈತ ಸಂಘದ ಕಾರ್ಯದರ್ಶಿಗಳಾದ ಹೈದೂರು ಜಯಣ್ಣನವರು ಮಾತನಾಡುತ್ತಾ ಗೋಲ್ಡ್ ರಮೇಶ್ ರವರ ಉದಾರತೆಯನ್ನು ಸ್ಮರಿಸಿದರು .
ಪಂಚಾಯತಿ ವ್ಯಾಪ್ತಿಯ ಎಲ್ಲಾ ಶಾಲೆಗಳ ಮಕ್ಕಳಿಗೆ ಸಮವಸ್ತ್ರವನ್ನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು
