ವರದಿ ರಾಣಿ ಪ್ರಸನ್ನ
ಸಕಲೇಶಪುರ ತಾಲೂಕು ಆಹಾರ ಇಲಾಖೆ ಶಿರಸ್ತೆದಾರರಾದ ಗೀತಾಂಜಲಿಯವರು ವರ್ಗಾವಣೆಗೊಂಡಿದ್ದು ಅವರಿಗೆ ಸಕಲೇಶಪುರ ತಾಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಪರವಾಗಿ ಬಿಳ್ಕೊಡುಗೆ ಸಮಾರಂಭ ಮಾಡಲಾಯಿತು.
ಸಕಲೇಶಪುರ ತಾಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಪರವಾಗಿ ಬೀಳ್ಕೊಡುಗೆ ನೀಡಿ ಸನ್ಮಾನಿಸಲಾಯಿತು ಹಾಗೂ ನೂತನವಾಗಿ ಸಕಲೇಶಪುರ ತಾಲೂಕು ಆಹಾರ ಶಿರಸ್ತೆದಾರರಾದ ದಾಕ್ಷಾಯಣಿ ರವರಿಗೆ ಸಕಲೇಶಪುರ ತಾಲೂಕು ನ್ಯಾಯ ಬೆಲೆ ಅಂಗಡಿ ಮಾಲೀಕರ ಪರವಾಗಿ ಸ್ವಾಗತವನ್ನು ಕೋರಲಾಯಿತು
ಹಾಗೆಯೇ ಉಚ್ಚಂಗಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ರಾಮಚಂದ್ರ ರವರನ್ನು ಸಕಲೇಶಪುರ ತಾಲೂಕು ನ್ಯಾಯ ಬೆಲೆ ಅಂಗಡಿ ಮಾಲೀಕರ ಸಂಘದ ದವರು ಸನ್ಮಾನಿಸಿದರು.

