ವರದಿ ರಾಣಿ ಪ್ರಸನ್ನ
ಸಕಲೇಶಪುರ ಸರ್ಕಾರಿ ಆಸ್ಪತ್ರೆ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ನಂತರ ಲಯನ್ಸ್ ಹಾಲ್ ನಲ್ಲಿ ರಕ್ತದಾನ ಶಿಬಿರ, ಹಾಗೂ ಆಲೂರಿನಲ್ಲಿ ರೋಗಿಗಳಿಗೆ ಹೃದಯ ತಪಾಸಣೆ* *ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ.
*
ಸಕಲೇಶಪುರ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರು, ಹಾಗೂ ಸಕಲೇಶಪುರ, ಆಲೂರು, ಕಟ್ಟಾಯ, ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಆದ ಶ್ರೀ ಮುರಳಿಮೋಹನ್ ರವರ 42ನೇ ಹುಟ್ಟು ಹಬ್ಬದ ಶುಭ ಕೋರುತ್ತಾ ಇದರ ಪ್ರಯುಕ್ತ ನಾಳೆ 22 /7/ 2025 ರಂದು 11:00 ಗಂಟೆಗೆ ಸಕಲೇಶಪುರ ಸರ್ಕಾರಿ ಆಸ್ಪತ್ರೆ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಂತರ ಲಯನ್ಸ್ ಹಾಲ್ ಬಿ ಎಂ ರಸ್ತೆ ಯಲ್ಲಿ ರಕ್ತದಾನ ಶಿಬಿರ, ಹಾಗೂ ಆಲೂರಿನಲ್ಲಿ ರೋಗಿಗಳಿಗೆ ಹೃದಯ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ.
ತಾಲೂಕಿನ ರೈತರು, ಸಾರ್ವಜನಿಕ ಬಂಧುಗಳು, ಕ್ಷೇತ್ರದ ಕಾರ್ಯಕರ್ತರು ಮುಖಂಡರುಗಳು ಹಾಗೂ ಅಭಿಮಾನಿಗಳು ಆಗಮಿಸಿ ಸದುಪಯೋಗ ಪಡೆದುಕೊಂಡು ಶುಭ ಹಾರೈಸಬೇಕೆಂದು ಮಾಜಿ ತಾಲೂಕು ಪಂಚಾಯತಿ ಉಪಾಧ್ಯಕ್ಷರಾದ ಕೃಷ್ಣೆಗೌಡ್ರು ಕರಡಿಗಾಲ, ಹಾಗೂ ವಳಲಹಳ್ಳಿಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರು, ಹಾಗೂ ಬೆಳೆಗಾರ ಸಂಘದ ಉಪಾಧ್ಯಕ್ಷರಾದ ರುದ್ರೇಶ್ ವಳಲಹಳ್ಳಿ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ವಸಂತ್ ಶುಭ ಕೋರಿದ್ದಾರೆ.
