ವರದಿ ರಾಣಿ ಪ್ರಸನ್ನ
ಕೇಂದ್ರ ಸರ್ಕಾರ 2004ರಲ್ಲಿ ಹೊಸ ಪಿಂಚಣಿಯನ್ನು ಜಾರಿಗೆ ತಂದಿದ್ದು ಅದೇ ರೀತಿ ದೇಶದ ಎಲ್ಲಾ ರಾಜ್ಯಗಳು ಕೇಂದ್ರ ಸರ್ಕಾರದ ಮಾದರಿಯಲ್ಲಿ ಹೊಸದಾಗಿ ಸರ್ಕಾರಿ ಸೇವೆಗೆ ನೇಮಕಗೊಳ್ಳುವ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿದ್ದು ಇದರಿಂದ ಸರ್ಕಾರಿ ನೌಕರರು ನಿವೃತ್ತಿ ಹೊಂದುವ ಸಂದರ್ಭದಲ್ಲಿ ಬರಬೇಕಾದ ಆರ್ಥಿಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.
ಹಾಗಾಗಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕೆಂದು ಇಂದು ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ಸಕಲೇಶಪುರ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಸಂಘದ ತಾಲೂಕು ಅಧ್ಯಕ್ಷರಾದ ಮಾಳಿಗೆ ಗೌಡ ಕಾರ್ಯದರ್ಶಿ ಜಗದೀಶ್ ನಿರ್ವಾಹಣಯ್ಯ ಕುಮಾರ್, ಲಕ್ಷ್ಮಣ ಮುಂಡಾಸ್, ಸಿದ್ದಲಿಂಗಯ್ಯ, ಯಶೋಧ, ತಾಜುನ್ನಿಸಾ ಇತರರು ಇದ್ದರು
