ವರದಿ ರಾಣಿ ಪ್ರಸನ್ನ
🌹ಪಟ್ಟಣವೋ ಅಥವಾ ಕೊಳಚೆ ಪ್ರದೇಶವೋ ಎಂಬಂತೆ ಆಗಿರುವ ಸಕಲೇಶಪುರ ಸುಭಾಷ್ ಮೈದಾನ
🌹ಮೂಗು ಬಿಚ್ಚಿಕೊಂಡು ಕುಳಿತ ಪುರಸಭೆ. ಮೂಗು ಮುಚ್ಚಿ ಕುಳಿತ ಸ್ಥಳೀಯರು.
🌹ಈ ಪರಿಸರ ವಾಸನೆ ಮುಕ್ತ ಆಗುವುದು ಯಾವಾಗ ? ಪ್ರವೀಣ್ ಶೆಟ್ಟಿ ಬಣ ಆಕ್ರೋಶ.
ಸಕಲೇಶಪುರದ ಸುಭಾಷ್ ಮೈದಾನದಲ್ಲಿ ಚರಂಡಿ ಹಾಗೂ ತ್ಯಾಜ್ಯದ ಅತಿಯಾದ ರಾಶಿ – ಸಾರ್ವಜನಿಕ ಆರೋಗ್ಯದ ಅಪಾಯ ಕ್ಕೆ ನಾಂದಿ ತ್ವರಿತ ಕ್ರಮಕ್ಕೆ ಆಗ್ರಹಿಸಿ ಕರವೇ ಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಲಾಯಿತು.
ಸುಭಾಷ್ ಮೈದಾನ ಪ್ರದೇಶದಲ್ಲಿ, ತ್ಯಾಜ್ಯ ಹಾಗೂ ಕಸದ ರಾಶಿಗಳು ಪ್ರತಿ ದಿನವೂ ಹೆಚ್ಚುತ್ತಿದ್ದು, ಜನಜೀವನದ ಮೇಲೆ ಗಂಭೀರ ಹಾನಿ ಉಂಟುಮಾಡುತ್ತಿದೆ.ತ್ವರಿತ ಮತ್ತು ಕಠಿಣ ಕ್ರಮವನ್ನು ಕೈಗೊಂಡು ಸಾರ್ವಜನಿಕರ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಈ ಮನವಿಯಲ್ಲಿ ಅಗ್ರಹಿಸಲಾಯಿತು.

